‘ಸಪ್ನೋಂಕಿ ರಾಣಿ’ ಮಾತು ಶುರು

  • IndiaGlitz, [Monday,February 24 2014]

ಎ ಆರ್ ಬಾಬು ಹಾಗೂ ಸೃಜನ್ ಲೋಕೇಶ್ ಅವರ ಕಾಂಬಿನೇಷನ್ ಅಲ್ಲಿ ತಯಾರಿಗಿರುವ ‘ಸಪ್ನೋಕ್ ಕಿ ರಾಣಿ’ ಇದೀಗ ಮಾತುಗಳ ಜೋಡಣೆ ಅನ್ನು ಸ್ಕೈ ಲೈನ್ ಶುರುವಾಗಿದೆ.

ಐಶ್ವರ್ಯ ಎಂಬ ಮುದ್ದಾದ ಅರಗಿಣಿ ‘ಸಪ್ನೋಂಕಿ ರಾಣಿ’ ಚಿತ್ರಕ್ಕೆ ಆಗಮಿಸಿದ್ದಾಳೆ. ಸನ್ ಶೈನ್ ಮೂವೀಸ್ ಅವರ ಚೊಚ್ಚಲ ಸಿನೆಮಾ ‘ಸಪ್ನೋಂಕಿ ರಾಣಿ’ ಐಶ್ವರ್ಯ ಚಿಕ್ಕ ಪಾತ್ರಗಳಲ್ಲಿ ‘ಸ್ವೀಟಿ’ ಹಾಗೂ ‘ಹಾಫ್ ಮೆಂಟಲ್’ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿದೆ. ಈ ಚಿತ್ರಕ್ಕೆ ಮಗ ಶಾನ್ ಕಥೆ ಹಾಗೂ ಚಿತ್ರಕಥೆ ಬರದರೆ ಅಪ್ಪ ಹೆಸರಾಂತ ನಿರ್ದೇಶಕ ಎ. ಆರ್. ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಸೃಜನ್ ಲೋಕೇಶ್ ಅವರು ಚಿತ್ರದ ಕಥಾ ನಾಯಕರು. ಅವಿನಾಷ್, ಶೋಬಾರಾಜ್, ಟೆನ್ನಿಸ್ ಕೃಷ್ಣ, ಹೊನ್ನಾವಳ್ಳಿ ಕೃಷ್ಣ, ಮಿತ್ರ, ದಿಲೀಪ್, ಅಶೋಕ್, ಚೇತನ್, ಚಿಕ್ಕಣ್ಣ, ಸೋಯಲ್ ಹಾಗೂ ಇತರರು ಇದ್ದಾರೆ. ಛಾಯಾಗ್ರಾಹಕ ಜೆ ಎಸ್ ವಾಲಿ ಅವರು ಡಿಜಿಟಲ್ ಹಾಗೂ ಮಾಮೂಲಿ ಫಿಲ್ಮ್ ಅನ್ನು ಬಳಸಿ ಚಿತ್ರೀಕರಣ ಮಾಡುತ್ತಲಿದ್ದಾರೆ.

ಧರ್ಮ ವಿಶ್ ಅವರ ರಾಗ ಸಂಯೋಜನೆ, ಸುರೇಶ್ ಅವರ ಸಂಕಲನ, ಮಾಸ್ ಮಾಧ ಅವರ ಸಾಹಸ, ಹೈಟ್ ಮಂಜು ಅವರ ನೃತ್ಯ ನಿರ್ದೇಶನೆ ಇದೆ. ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ವಿ ಮನೋಹರ್, ರವಿಕಿರಣ್ ಅವರ ಸಾಹಿತ್ಯವಿದೆ. ಚಂದ್ರ ಜಿ (ಅಪ್ಪಯ್ಯ) ಟಿ ಗಂಗರಾಜು ಅವರು ಈ ಚಿತ್ರದ ಸಹ ನಿರ್ಮಾಪಕರು. ಅರುಣ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.